Beauty tips- Hair Problems
March 2, 2019ಪೈಲ್ವಾನ್ ಗೆ ಕಿಚ್ಚ ಫ್ಯಾನ್ಸ್ ಫಿದಾ
March 6, 2019ಚಳಿಗಾಲ ಮತ್ತು ಫ್ಯಾಶನ್
ದಿನಗಳು ಉರುಳುತ್ತಲೇ ಇವೆ. ಕಾಲಕ್ಕೆ ತಕ್ಕ ಹಾಗೆ ನಾವು ಕೂಡ ಬದಲಾಗುತ್ತಲೇ ಇರಬೇಕು. ಫ್ಯಾಶನ್ ಕ್ಷೇತ್ರದಲ್ಲಿಯೂ ದಿನದಿಂದ ದಿನಕ್ಕೆ ಬದಲಾವಣೆಗಳನ್ನು ಕಾಣುತ್ತಲೇ ಇದ್ದೇವೆ. ಸೀಸನ್ ಗೆ ತಕ್ಕಂತೆ ನಾವು ಕೂಡ ಅದಕ್ಕೆ ತೆರೆದು ಕೊಳ್ಳ ಬೇಕಾಗುತ್ತದೆ. ಈಗಿನ ಫ್ಯಾಶನ್ ಯುಗದಲ್ಲಿ ನಾವು ಸ್ಟೈಲಿಶ್ ಆಗಿ ಕಾಣ ಬೇಕೆಂದು ಬಯಸುವುದು ಸಹಜ. ಆದರೆ ವಾತಾವರಣದಲ್ಲಿ ಆಗುವ ಕೆಲವು ಬದಲಾವಣೆಗಳು, ಹಾಗೂ ಅವುಗಳಿಗೆ ನಮ್ಮ ದೇಹ ಒಗ್ಗಿ ಕೊಳ್ಳುವುದೇ ಎನ್ನುವ ಭಯ ನಮ್ಮನ್ನು ಕಾಡುತ್ತವೆ. ಈ ಸಮಯದಲ್ಲಿ ಯಾವ ಡ್ರೆಸ್ ಹಾಕ ಬೇಕು. ಯಾವ ಬಟ್ಟೆಗಳಿಗೆ ಹೆಚ್ಚು ಮಾನ್ಯತೆ ನೀಡಬೇಕೆಂಬುದರ ಬಗ್ಗೆ ನಾವು ತಿಳಿದು ಕೊಳ್ಳ ಬೇಕಾಗುತ್ತದೆ.
ಚಳಿಗಾಲಕ್ಕೆ ಶಗ್ಸ್
ಶಗ್ಸ್ ಗಳು ಇದೀಗ ಮಾರುಕಟ್ಟೆಯಲ್ಲಿ ಶೈನಿಂಗ್ ಮೆಟೀರಿಯಲ್ ನ ಪ್ರಿಂಟ್ಸ್ ಗಳಲ್ಲಿ ಲಭ್ಯವಿದೆ. ಇದೀಗ ಇದು ಬೇರೆ ಬೇರೆ ಕಲರ್ ಗಳಲ್ಲಿ ಲಭ್ಯವಿದ್ದು ಅದನ್ನು ಧರಿಸಿ ಕೊಂಡಾಗ ಸೌಂದರ್ಯಕ್ಕೊಂದು ಹೊಸ ಲುಕ್ ಬರುತ್ತದೆ. ಈ ಟೈಮ್ ನಲ್ಲಿ ಶ್ರಗ್ಸ್ ಗಿಂತ ಬೇರೆ ಬೆಸ್ಟ್ ಫ್ರೆಂಡ್ಸ್ ಇನ್ನೆಲ್ಲೂ ಸಿಗದು. ಎಲ್ಲಿ ನೋಡಿದರೂ ಹೆಚ್ಚಾಗಿ ಯುವತಿಯರು ಡ್ರೆಸ್ ಮೇಲೆ ಶ್ರಗ್ಸ್ ಧರಿಸೋದು ತುಂಬಾನೇ ಕಾಮನ್ ಆಗಿ ಬಿಟ್ಟಿದೆ. ಯಾವುದೇ ಡ್ರೆಸ್ ಗೂ ಇದು ಒಪ್ಪುವುದಲ್ಲದೇ ಪರಿಪೂರ್ಣ ಲುಕ್ ನಿಮ್ಮದಾಗುತ್ತದೆ.
ಫ್ಲೋರಲ್ ಪ್ಯಾಂಟ್ ಗಳು
ಈಗ ಬಗೆ ಬಗೆ ಕಲರ್ ಹಾಗೂ ಡಿಸೈನ್ ಗಳಲ್ಲಿ ಪ್ಯಾಂಟ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದೊಂದು ಕಾಲದಲ್ಲಿ ಕೇವಲ ಕಪ್ಪು , ಗ್ರೇ, ಡಾರ್ಕ್ ಬ್ಲ್ಯೂ,ಲೈಟ್ ಬ್ಲ್ಯೂಕಲರ್ ನ ಪ್ಯಾಂಟ್ ಗಳು ಲಭ್ಯವಿದ್ದವು ಇದೀಗ ನಮಗಿಷ್ಟ ಆಗುವಂತಹ ಹಾಗೂ ನಮಗೆ ಮೆಚ್ಚುಗೆ ಆಗುವಂತಹ ಪ್ಯಾಂಟ್ ಗಳನ್ನು ಖರೀದಿಸಲು ಒಳ್ಳೆಯ ಅವಕಾಶವಿದೆ. ಫ್ಲೋರಲ್ ಪ್ಯಾಂಟ್ ಗಳು ನೋಡುಗರಿಗೆ ಆಕರ್ಷಿತವಾಗಿರುತ್ತದೆ. ಮಾತ್ರವಲ್ಲ ಹೆಚ್ಚಿನ ಎಲ್ಲರಿಗೂ ಇದು ಡಿಫರೆಂಟ್ ಲುಕ್ ಬರುವಂತೆ ಮಾಡುತ್ತದೆ. ಈ ಪ್ಯಾಂಟನ್ನು ಧರಿಸಿ ಕೊಂಡರೆ ಅದಕ್ಕೆ ಒಪ್ಪುವಂತಹ ನಾನಾ ಬಗೆಯ ಟಾಪ್ ಗಳನ್ನು ನಾವು ಆಯ್ಕೆ ಮಾಡಿಕೊಳ್ಳ ಬಹುದು.
ಜಾಕೆಟ್ ಗಳ ಸೊಬಗು
ಚಳಿ ಶುರುವಾಯಿತು ಎಂದರೆ ಬೆಚ್ಚಗೆ ಮನೆಯಲ್ಲೇ ಇರೋಣ ಅನಿಸುತ್ತೆ. ಆದರೆ ಉದ್ಯೋಗಸ್ಥ ಮಹಿಳೆಯರು ಆಫೀಸ್ ಗೆ ಹೋಗಲೇ ಬೇಕಾದ ಪರಿಸ್ಥಿತಿ. ಸ್ವೆಟರ್ ಚಳಿಯನ್ನು ತಡೆಯುತ್ತದೆ ನಿಜ. ಅವುಗಳಿಗೆ ಈಗ ಬೇಡಿಕೆ ಕಡಿಮೆಯಾಗಿದೆ. ಇದು ಹಳೇ ಕಾಲದ ಫ್ಯಾಶನ್ ಎಂದು ತುಂಬಾ ಮಂದಿ ಇದನ್ನು ತಿರಸ್ಕಾರ ಮಾಡುತ್ತಾರೆ. ಚಳಿಗಾಲಕ್ಕೆ ಹಾಗೂ ಚಳಿಯನ್ನು ಮರೆಮಾಚಲು ಸೂಕ್ತ ಎಂದೆನಿಸುವುದು ಜಾಕೆಟ್ ಗಳಿಂದ. ಈಗ ಈ ಜಾಕೆಟ್ ಗಳು ಯುವತಿಯರ ಫೇವರಿಟ್ ಎಂದೇ ಹೇಳಬಹುದು. ಇವುಗಳನ್ನು ಎಲ್ಲೆಂದರಲ್ಲಿ ಅಲ್ಲಿ ಹಾಕಿ ಕೊಳ್ಳ ಬಹುದು. ಆಫೀಸ್ ಗಳಿಗೆ ಹೋದಾಗ ಅಥವಾ ಹೊರಗಡೆ ಸುತ್ತಾಡಲು ಹೋದಾಗಲೂ ಇವುಗಳನ್ನು ಧರಿಸಿಕೊಳ್ಳ ಬಹುದು. ಈಗ ಲೆದರ್ ಜಾಕೆಟ್ ,ಬ್ಲೇಝರ್ ,ಡೆನಿಮ್ ಜಾಕೆಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಸೀರೆ ಮೇಲೆಯೂ ಜಾಕೆಟ್ ತೊಡುವುದು ಟ್ರೆಂಡ್ ಆಗಿದೆ. ಸೀರೆಗೆ ತಕ್ಕಂತಹ ವಿನ್ಯಾಸದ ಜಾಕೆಟ್ ತೊಟ್ಟು ಸೀರೆಯ ಅಂದ ಹೆಚ್ಚಿಸಬಹುದು. ಸೀರೆಗೊಪ್ಪುವ ಜಾಕೆಟ್ ಮಾತ್ರವಲ್ಲ ಜಾಕೆಟನ್ನೇ ಹೋಲುವ ಬ್ಲೌಸ್ ತೊಡಬಹುದು. ಸೀರೆ ಉಟ್ಟಾಗ ಧರಿಸಲೆಂದೇ ವಿಶೇಷ ವಿನ್ಯಾಸಗಳ ಜಾಕೆಟ್ ಗಳು ಲಭ್ಯವಿದ್ದಾವೆ.
ವೆಸ್ಟರ್ನ್ ಟ್ರೆಡಿಶನಲ್ ಫ್ಯಾಶನ್
ನಾವು ಧರಿಸುವ ಉಡುಪುಗಳಲ್ಲಿ ಬದಲಾವಣೆ ಕಾಮನ್. ಹಳೆ ಶೈಲಿಯ ಟ್ರೆಂಡ್ ಗಳು ಇದೀಗ ಹೊಸ ನಮೂನೆಯ ರೀತಿಯಲ್ಲಿ ನಮ್ಮ ಮುಂದೆ ಕಾಣಿಸಿ ಕೊಳ್ಳುತ್ತಿವೆ. ಬಾಟಮ್ ವೇರ್ ಗಳಲ್ಲಿ ಪಟಿಯಾಲಾ ಪ್ಯಾಂಟ್ , ಹ್ಯಾರಮ್ ಪ್ಯಾಂಟ್ಸ್ ,ಸಲ್ವಾರ್ ಧೋತಿ ಪ್ಯಾಂಟ್ಸ್ ,ಮ್ಯಾಕ್ಸಿ ಸ್ಕರ್ಟ್, ಪಲಜೋ ಪ್ಯಾಂಟ್ ಹೀಗೆ ನಾನಾ ನಮೂನೆಯ ಬಾಟಮ್ ವೇರ್ ಉಡುಪುಗಳ ಟ್ರೆಂಡ್ಸ್ ಗಳನ್ನು ನಾವು ಫ್ಯಾಶನ್ ಲೋಕದಲ್ಲಿ ಕಾಣ ಬಹುದು. ಈಗೇನಿದ್ದರೂ ವೆಸ್ಟರ್ನ್ -ಟ್ರೆಡಿಶನಲ್ ಗಳ ಫ್ಯಾಶನ್ ಕಾಲ. ಶಾರ್ಟ್ ಟಾಪ್ ಜತೆಗೆ ಇಂಡಿಯನ್ ಡಿಸೈನ್ ಬಾಟಮ್ ವೇರ್ ಇದರ ಜತೆಗೆ ವಿವಿಧ ರೀತಿಯ ಫ್ಯಾಶನ್ ಸ್ಟೈಲ್ ಗಳಿಗೆ ಪ್ಯಾಂಟ್ ಗಳು ಸಹಕಾರಿ. ಇವಿಷ್ಟು ಅಲ್ಲದೇ ಲಾಂಗ್ ಮತ್ತು ಶಾರ್ಟ್ ಸ್ಕರ್ಟ್ ಗಳು ಕೂಡ ಗ್ರಾಂಡ್ ಲುಕ್ ನೀಡುತ್ತವೆ. ಹೆಣ್ಮಕ್ಕಳಿಗೆ ಮೇಕಪ್ ,ಸ್ಟೈಲ್ ಜತೆಗೆ ತಾವು ಉಡುವ ಉಡುಪುಗಳು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡುತ್ತವೆ. ಯಾವುದೇ ಸಮಾರಂಭಕ್ಕೆ , ಕಾರ್ಯಕ್ರಮಗಳಿಗೆ ಹೋದಾಗ ಅವರ ಉಡುಗೆ ಬಗ್ಗೆ ಹೆಚ್ಚಿನ ಕಾಳಜಿ ಇಡುತ್ತಾರೆ. ಹಾಗಾಗಿ ಬದಲಾಗುತ್ತಿರುವ ಫ್ಯಾಶನ್ ಗಳಿಗೆ ಕೂಡ ನಾವು ತೆರೆದು ಕೊಳ್ಳಬೇಕಾಗುತ್ತದೆ.
ನೀ ಲೆಂಥ್ ಶಾರ್ಟ್ಸ್
ಇತ್ತೀಚೆಗೆ ನೀ ಲೆಂಥ್ ಶಾರ್ಟ್ಸ್ ಗಳು ಟ್ರೆಂಡ್ ಕ್ರಿಯೆಟ್ ಮಾಡುತ್ತಿವೆ. ಹಿಂದೆಲ್ಲಾ ತ್ರೀ ಫೋರ್ತ್ ಚಡ್ಡಿಯನ್ನು ಕೇವಲ ಪುರುಷರೇ ಹಾಕಿಕೊಳ್ಳುತ್ತಿದ್ದರು. ಆದರೆ ಇದೀಗ ಇದು ಯುವತಿಯರ ಗಮನವನ್ನು ಸೆಳೆದಿದೆ. ಜೀನ್ಸ್,ಹತ್ತಿ,ಸ್ಯಾಟಿನ್,ಪಾಲಿಸ್ಟರ್,ನೈಲಾನ್ ಹೀಗೆ ಎಲ್ಲಾ ವಿಧದಲ್ಲಿಯೂ ಕೈಗೆಟುವ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ನೀ ಲೆಂಥ್ ಶಾರ್ಟ್ಸ್ ಕೂಡಾ ಫ್ಯಾಶನ್ ಆಗಿ ಬದಲಾಗಿದ್ದು, ಇದನ್ನು ಅಂಗಿ ಜತೆನೂ ಹಾಕಿ ಕೊಳ್ಳಬಹುದು. ಶರ್ಟ್,ಟೀ ಶರ್ಟ್ ಜತೆಗೂ ತೊಡಬಹುದು. ಇದರ ಜತೆಗೆ ಸೊಂಟಕ್ಕೆ ಬೆಲ್ಟ್ ಹಾಕಿ ಕೊಂಡರೆ ಮತ್ತಷ್ಟು ಸುಂದರವಾಗಿ ಕಾಣುತ್ತೀರ. ಟೀ ಶರ್ಟ್, ಶರ್ಟ್ ಜತೆಗೆ ಸೊಂಟದಷ್ಟು ಉದ್ದದ ಜಾಕೆಟ್ ಹಾಗೂ ಕೋಟ್ ಸುಂದರವಾಗಿ ಕಾಣಬಲ್ಲುದು.
ಮಾಲ್ ಗಳು ಹೆಚ್ಚು ಸೂಕ್ತ
ಡ್ರೆಸ್ ಗಳನ್ನು ಆಯ್ಕೆ ಮಾಡಲು ಮಾಲ್ ಗಳಲ್ಲಿ ಹೆಚ್ಚು ಅವಕಾಶಗಳಿವೆ. ಅಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅವರವರ ಆಕಾರ,ಗಾತ್ರಕ್ಕೆ ತಕ್ಕಂತೆಯೇ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಹೆಚ್ಚು ಹುಡುಕುವ ಸನ್ನಿವೇಶ ಸೃಷ್ಟಿಯಾಗದು. ಒಂದೇ ಸ್ಥಳದಲ್ಲಿ ಎಲ್ಲಾ ಬಗೆಯ ನಮಗೆ ಬೇಕಾದ ಉಡುಪುಗಳು ಸಿಗುತ್ತವೆ. ಹೀಗೆ ನಿಮಗೆ ಬೇಕೆಂದೆನಿಸುವ ಡ್ರೆಸ್ ಹಾಗೂ ಅನುಕೂಲವೆಂದೆನಿಸುವ ಡ್ರೆಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ನೀವು ತಯರಾಗಿ.