ಹೊಸ ಫ್ಯಾಶನ್ ಗೆ ತೆರೆದುಕೊಳ್ಳಿ
March 16, 2019ಹ್ಯುಮನ್ ಇಂಟ್ರೆಸ್ಟಿಂಗ್ – ಹನುಮಂತ
March 20, 2019ತೆರೆ ಮೇಲೆ ಬರಲು ಸಜ್ಜಾಗಿದೆ ‘ಕೇಸರಿ’
– ಅಕ್ಷಯ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ
– ಟ್ರೈಲರ್ ಗೆ ಯೂ ಟ್ಯೂಬ್ ನಲ್ಲಿ ಭಾರೀ ರೆಸ್ಪಾನ್ಸ್ ..
ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೇಸರಿ ರಿಲೀಸ್ ಗೆ ರೆಡಿಯಾಗುತ್ತಿದೆ. ಈಗಾಗ್ಲೇ ಕೇಸರಿ ಚಿತ್ರದ ಫಸ್ಟ್ ವೀಡಿಯೋ ರಿಲೀಸ್ ಆಗಿದ್ದು, ಅಕ್ಷಯ್ ಅಭಿಮಾನಿಗಳಂತು ಥ್ರಿಲ್ ಆಗಿದ್ದಾರೆ. ಕೇಸರಿ 19ನೇ ಶತಮಾನದ ಸಾರಾಗಢಿ ಯುದ್ಧದ ಕತೆಯುಳ್ಳ ಚಿತ್ರವಾಗಿದ್ದು, ಈಗಾಗ್ಲೇ ಚಿತ್ರಾಭಿಮಾನಿಗಳಲ್ಲಿ ಕ್ರೇಝ್ ಹುಟ್ಟಿಸಿದೆ.
ಚಿತ್ರದ ವೀಡಿಯೋ ತುಣುಕು ರಿಲೀಸ್
ವಿಭಿನ್ನ ಚಿತ್ರಕಥೆಯನ್ನು ಒಳಗೊಂಡ ಈ ಚಿತ್ರವು ಸಹಜವಾಗಿಯೇ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದೇ ತಡ ಕೇವಲ ಹತ್ತು ಗಂಟೆಗಳಲ್ಲಿ ಸುಮಾರು 70 ಲಕ್ಷದಷ್ಟು ವೀಕ್ಷಕರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಮೂರು ನಿಮಿಷ 5 ಸೆಕೆಂಡುಗಳ ಕಾಲ ಇರುವ ಈ ಟ್ರೈಲರ್ ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೆ.21ರಂದು ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅದಕ್ಕೂ ಮುನ್ನ ವಿಡಿಯೋ ಅಂದರೆ ಚಿತ್ರದ ಟೀಸರ್ ಅನ್ನು ಯೂ ಟ್ಯೂಬ್ ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ಮೂಲಕ ಟ್ರೈಲರ್ ಗಾಗಿ ಕಾಯುತ್ತಿದ್ದ ಚಿತ್ರದ ಅಭಿಮಾನಿಗಳಿಗೆ ಚಿತ್ರತಂಡ ಬಿಗ್ ಸರ್ ಪ್ರೈಸ್ ನೀಡಿದೆ ಅಂತಾನೇ ಹೇಳಬಹುದು. ಇನ್ನು ನಟ ಅಕ್ಷಯ್ ಕುಮಾರ್ ಅವರು ಟ್ವಿಟರ್ ನಲ್ಲಿ ಈ ಚಿತ್ರದ ವಿಡಿಯೋವನ್ನು ಶೇರ್ ಮಾಡಿ ಕೊಂಡಿದ್ದಾರೆ. ಹಾಗೂ ಈ ಚಿತ್ರದ ಕುರಿತಂತೆ ಅವರ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. “ಇದು ನಂಬಲಸಾಧ್ಯವಾಗದ ನಿಜವಾದ ಕತೆಯಾಗಿದೆ. ಈ ಚಿತ್ರದ ಮೊದಲ ವಿಡಿಯೋವನ್ನು ನಿಮಗೆ ತೋರಿಸಿತ್ತಿದ್ದೇವೆ. ಕೇಸರಿ ಚಿತ್ರದ ಟ್ರೈಲರ್ ಫೆ.21ರಂದು ಬಿಡುಗಡೆಯಾಗಲಿದೆ ” ಹೀಗೆನ್ನುತ್ತಾ ಅಕ್ಷಯ್ ಕುಮಾರ್ ಅವರು ಹ್ಯಾಶ್ ಟ್ಯಾಗ್ ಹಾಕಿಕೊಂಡಿದ್ದಾರೆ.
ಮಾರ್ಚ್ 21ರಂದು ರಿಲೀಸ್
ಎಲ್ಲವೂ ಅಂದು ಕೊಂಡಂತೆ ನಡೆದರೆ ಚಿತ್ರವು ಮಾರ್ಚ್ 21ರಂದು ರಿಲೀಸ್ ಆಗಲು ರೆಡಿಯಾಗಿದೆ. ಈಗಾಗ್ಲೇ ಚಿತ್ರದ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು, ಚಿತ್ರವು ಅದ್ದೂರಿಯಿಂದ ರಿಲೀಸ್ ಆಗಲು ಚಿತ್ರತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಚಿತ್ರದ ಟ್ರೈಲರ್ ತಿಳಿಸುವಂತೆ ಸಿಖ್ ರಾಜರ ವಿರುದ್ಧ ಹೋರಾಡಲು ಆಫ್ಘನ್ ಯೋಧರು ಓಡುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ. ಫೆ. 21ರಂದು ಟ್ರೈಲರ್ ರಿಲೀಸ್ ಆದರೆ , ಒಂದು ತಿಂಗಳು ಕಳೆದ ಬಳಿಕ ಅಂದರೆ ಮಾರ್ಚ್ 21ರಂದು ಐತಿಹಾಸಿಕ ಚಿತ್ರ ತೆರೆ ಮೇಲೆ ಮೂಡಿ ಬರಬೇಕೆನ್ನುವುದೇ ಚಿತ್ರತಂಡದ ಲೆಕ್ಕಾಚಾರ.
ಪರಿಣೀತಿ ಚೋಪ್ರಾ ನಾಯಕಿ
ಬಾಲಿವುಡ್ ನಲ್ಲಿ ತನ್ನದೇ ಚಾರ್ಮ್ ಮೂಡಿಸಿರುವ ಹಾಗೂ ಬಾಲಿವುಡ್ ನ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಮಣಿ ಪರಿಣೀತಿ ಚೋಪ್ರಾ ಅವರು ಈ ಚಿತ್ರಕ್ಕೆ ನಾಯಕಿ ನಟಿ. ಚಿತ್ರದಲ್ಲಿ ಪರಿಣೀತಿ ಚೋಪ್ರಾ ಅವರು ಮೊದಲ ಬಾರಿಗೆ ಅಕ್ಷಯ್ ಕುಮಾರ್ ಅವರ ಜತೆ ರೋಮ್ಯಾನ್ಸ್ ಮಾಡುತ್ತಿದ್ದಾರೆ . ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು,ಖ್ಯಾತ ಪಂಜಾಬಿ ನಿರ್ದೇಶಕ ಅನುರಾಗ್ ಸಿಂಗ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 21 ಸಿಖ್ ಯೋಧರ ಮಿಲಿಟರಿ ಕಮಾಂಡರ್ ಪಾತ್ರವನ್ನು ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಸಾವಿರಾರು ಆಫ್ಘನ್ ಆಕ್ರಮಣಕಾರರ ವಿರುದ್ಧ ಹೋರಾಡಿದ ಹವೀಲ್ದಾರ್ ಇಶಾರ್ ಸಿಂಗ್ ಪಾತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿ ಪರಿಣೀತಿ ಚೋಪ್ರಾ ಅವರು ನಾಯಕಿಯಾಗಿ ನಟಿಸುವುದರೊಂದಿಗೆ ಅವರ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿ ಗೊಳಿಸಿದ್ದಾರೆ.
ಮೊದಲ ಬಾರಿ ಯುದ್ಧ ಕಥಾನಕ ಚಿತ್ರದಲ್ಲಿ ನಟನೆ
ಯುದ್ಧ ಕಥೆಯಾಧಾರಿತ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ನಟಿಸುವ ತವಕ ಹೆಚ್ಚಾಗಿದೆ ಎನ್ನುತ್ತಾರೆ ಅಕ್ಷಯ್. ಏಕೆಂದರೆ ಈಗಾಗ್ಲೇ ರಿಯಲ್ ಸ್ಟೋರಿಗಳನ್ನಾಧರಿಸಿದ ಟಾಯ್ಲೆಟ್ ಏಕ್ ಪ್ರೇಮ್ ಕಥಾ , ಪ್ಯಾಡ್ ಮ್ಯಾನ್ ಚಿತ್ರದಲ್ಲಿ ಕಾಣಿಸಿ ಕೊಂಡ ಅಕ್ಷಯ್ ಕುಮಾರ್ ಅವರಿಗೆ ಒಂದೇ ರೀತಿಯ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲವಂತೆ. ಇದರ ಬದಲಿಗೆ ನಾನಾ ಚಿತ್ರಗಳಲ್ಲಿ ವಿವಿಧ ಗೆಟಪ್ ಗಳಲ್ಲಿ ಕಾಣಿಸಿ ಕೊಂಡು ನಟಿಸಬೇಕೆನ್ನುವುದೇ ಅವರ ಅಭಿಲಾಷೆ. ಮೊದಲೆಲ್ಲಾ ಆಕ್ಷನ್ ಚಿತ್ರಗಳಲ್ಲಿ ಮಾತ್ರ ಸೀಮಿತವಾಗಿದ್ದ ಅಕ್ಕಿ ನಂತರ ಕಾಮಿಡಿ ಚಿತ್ರಗಳಲ್ಲೂ ಜನಪ್ರಿಯ ನಟರೆನಿಸಿಕೊಂಡರು. ಈ ಬಾರಿ ಅಭಿಮಾನಿಗಳ ಮುಂದೆ ಡಿಫರೆಂಟ್ ಸಬ್ಜೆಕ್ಟ್ ಹಾಗೂ ಡಿಫರೆಂಟ್ ಲುಕ್ ನಲ್ಲಿ ಕಾಣಿಕೊಳ್ಳುತ್ತಿದ್ದಾರೆ. ಆದರೆ ಯುದ್ಧ ಕಥಾನಕ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿ ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಅಂತಾರೆ ನಟ ಅಕ್ಷಯ್ ಕುಮಾರ್ ಅವರು.
ದೇಶಾದ್ಯಂತ ಸದ್ದು ಮಾಡುತ್ತಿದೆ ಕೇಸರಿ
ಈಗಾಗ್ಲೇ ದೇಶದೆಲ್ಲೆಡೆ ಬಾರಿ ಸದ್ದು ಮಾಡುತ್ತಿರುವ ಈ ಸಿನಿಮಾ ಯೂ ಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ. ಈ ಚಿತ್ರದ ಟ್ರೈಲರ್ ನೋಡಿದ ಸಿನಿ ಅಭಿಮಾನಿಗಳಂತು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಟ್ರೈಲರೇ ಅದ್ದೂರಿಯಾಗಿ ಮೂಡಿ ಬಂದಿದೆ ಎಂದಾದರೆ ಇನ್ನು ಚಿತ್ರ ಹೇಗಿರ ಬಹುದು ಎನ್ನುವ ಕುತೂಹಲ ಚಿತ್ರ ಪ್ರೇಮಿಗಳಲ್ಲಿದೆ. ಹಾಗೂ ಪ್ರತಿ ಬಾರಿ ಆಕ್ಷನ್, ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದ ಅಕ್ಷಯ್ ಕುಮಾರ್ ಅವರ ಈ ಗೆಟಪ್ ಕಾತುರದಿಂದ ಕಾಯುವಂತೆ ಮಾಡಿದೆ.
ಶೂಟಿಂಗ್ ನಲ್ಲಿ ಅಗ್ನಿ ಅವಘಡ
ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಭಾರಿ ದೊಡ್ಡ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಆದರೆ ಅದೃಷ್ಟವಶಾತ್ ಯಾವುದೇ ತಾರೆಯರಿಗಾಗಲೀ , ತಂತ್ರಜ್ಞರಿಗಾಗಲೀ ಹಾನಿಯಾಗಿಲ್ಲ. ಮುಂಬೈನಿಂದ 200 ಕಿ.ಮೀ ದೂರದಲ್ಲಿರುವ ವಾಯಿ ಎಂಬಲ್ಲಿ ಈ ಅವಘಡ ಸಂಭವಿಸಿತ್ತು. ಚಿತ್ರಕ್ಕಾಗಿ ಯುದ್ಧದ ಸನ್ನಿವೇಶವೊಂದರ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಗ್ನಿ ಅನಾಹುತ ಉಂಟಾಯಿತು. ಚಿತ್ರದ ನಾಯಕ ಅಕ್ಷಯ್ ಕುಮಾರ್ ಅವರು ಶೂಟಿಂಗ್ ನಲ್ಲಿ ಪಾಲ್ಗೊಂಡು ತನ್ನ ಭಾಗದ ದೃಶ್ಯಗಳಲ್ಲಿ ಅಭಿನಯಿಸಿ,ನಿರ್ಗಮಿಸಿದ ನಂತರ ಈ ದುರ್ಘಟನೆ ನಡೆದಿತ್ತು. ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಇಡೀ ಸೆಟ್ ಅಗ್ನಿಗಾಹುತಿಯಾಗಿರುವುದರಿಂದ ಮತ್ತೊಮ್ಮೆ ಅದೇ ಸೆಟ್ ನ್ನು ಮರು ನಿರ್ಮಿಸಬೇಕಾದ ಪರಿಸ್ಥಿತಿ ಬಂದೊದಗಿತು.
ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಬರುತ್ತಿರುವ ನಟ ಅಕ್ಷಯ್ ಕುಮಾರ್ ಅವರ ಈ ಚಿತ್ರದ ಮೇಲೆ ಭಾರಿ ಭರವಸೆ ಇದೆ. ಕೇಸರಿ ಚಿತ್ರದಲ್ಲಿಯೂ ನಟ ಅಕ್ಷಯ್ ಕುಮಾರ್ ಕಮಾಲ್ ಮಾಡುತ್ತಾರಾ ? ಈ ಚಿತ್ರವೂ ಯಶಸ್ವಿಯಾಗಲಿ ಅನ್ನೋದೇ ನಮ್ಮೆಲ್ಲರ ಹಾರೈಕೆ …