ಪೈಲ್ವಾನ್ ಗೆ ಕಿಚ್ಚ ಫ್ಯಾನ್ಸ್ ಫಿದಾ
March 6, 2019ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ
March 10, 2019#10 years challenge ನೀವು ರೆಡಿನಾ?
– ಸವಾಲಿಗೆ ಜೈ ಎಂದ ಸಿನಿಮಾ ನಟಿ ಮಣಿಯರು
– ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ನದ್ದೇ ಸುದ್ದಿ
ಇತ್ತೀಚೆಗೆ ಚಾಲೆಂಜ್ ಎಂಬ ಆರೋಗ್ಯಕರ ಟ್ರೆಂಡ್ ಶುರುವಾಗಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ. # ಐಸ್ ಬಕೆಟ್ ಚಾಲೆಂಜ್, # ಕಿಕಿ ಚಾಲೆಂಜ್ ಸೇರಿದಂತೆ ಹಲವಾರು ಚಾಲೆಂಜ್ ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕೆಲವು ತಿಂಗಳುಗಳ ಹಿಂದೆ ಫಿಟ್ನೆಸ್ ಚಾಲೆಂಜ್ ಮೂಲಕ ಇಡೀ ದೇಶವೇ ಕೈ ಜೋಡಿಸಿತ್ತು. ಇದೀಗ ಮತ್ತೊಂದು ಟ್ರೆಂಡ್ ಶುರುವಾಗಿದೆ. ಅದುವೇ #10 ಥಿeಚಿಡಿs ಛಿhಚಿಟಟeಟಿge. ಈ ಚಾಲೆಂಜನ್ನು ಹಾಲಿವುಡ್, ಬಾಲಿವುಡ್,ಟಾಲಿವುಡ್, ಸ್ಯಾಂಡಲ್ ವುಡ್ ನಲ್ಲಿನ ನಟ ನಟಿಯರು ಸ್ವೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಬರೀ ಚಿತ್ರರಂಗ ಮಾತ್ರವಲ್ಲ ಈ ಚಾಲೆಂಜ್ ಅನ್ನು ಹೆಚ್ಚಿನವರು ಸ್ವೀಕರಿಸಿದ್ದಾರೆ. ಅವರವರ 10 ವರ್ಷದ ಹಿಂದಿನ ಫೋಟೋ ಹಾಗೂ ಇತ್ತೀಚಿನ ಪೋಟೋ ಜತೆಗೆ ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೊಸ ಟ್ರೆಂಡ್ ಶುರು
`# 10 ಇಯರ್ಸ್ ಚಾಲೆಂಜ್’ಎನ್ನುವ ಟ್ರೆಂಡ್ ಗೆ ಸಾಕಷ್ಟುಮಂದಿ ಸೆಲೆಬ್ರಿಟಿಗಳು ಭಾಗಿಯಾಗಿದ್ದು, ತಮ್ಮ ಹತ್ತು ವರ್ಷಗಳ ಹಿಂದಿನ ಫೋಟೋ ಜತೆಗೆ ಇತ್ತೀಚಿಗಿನ ಪೋಟೋ ಜೋಡಿಸಿ ತಾವೇನು ವ್ಯತ್ಯಾಸ ಆಗಿಲ್ಲ ಎಂಬುದನ್ನು ವಿವರಿಸಿದ್ದಾರೆ. ಮೊದಲಿಗೆ ಹಾಲಿವುಡ್ ಅಂಗಳದಲ್ಲಿ ಶುರುವಾಗಿದ್ದ ಈ ಟ್ರೆಂಡ್ ಇದೀಗ ಎಲ್ಲಾ ಕಡೆ ಹಬ್ಬಿದೆ. 2007ರಿಂದ 2009ರವರೆಗಿನ ಹಳೆಯ ಫೋಟೋವನ್ನು ತೆಗೆದು ಕೊಂಡು ಅದರ ಪಕ್ಕದಲ್ಲಿ 2017ರಿಂದ 2019ರ ನಡುವಿನ ಹೊಸ ಫೋಟೋವನ್ನು ಸೇರಿಸಿ ಕೊಳ್ಳಲಾಗುತ್ತಿದೆ. ಈ ಮೂಲಕ ಮೊದಲು ಹೇಗಿದ್ದೆ ಈಗ ಹೇಗಾಗಿದ್ದೇನೆ ಎಂದು ಪೋಟೋಗಳ ಮೂಲಕ ತಿಳಿಸಿ ಕೊಡುವುದೇ ಈ ಹೊಸ ಚಾಲೆಂಜ್ ನ ಮೂಲ ಉದ್ದೇಶ. ಈ ಟ್ರೆಂಡ್ ಬರೀ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಲಕ್ಷಾನುಗಟ್ಟಲೆಯಲ್ಲಿ ಈ ಚಾಲೆಂಜ್ ಗೆ ಕೈ ಜೋಡಿಸಿದ್ದಾರೆ. ಈ ಟ್ರೆಂಡ್ ಸೋಷಿಯಲ್ ಮಿಡಿಯಾದಲ್ಲಿ ಈಗಲೂ ಮುಂದುವರಿಯುತ್ತಲೇ ಇದೆ.
ಎಲ್ಲರೂ ಪಾಲ್ಗೊಳ್ಳಬಹುದು
ಇಲ್ಲಿ ಯಾವುದೇ ನಿಭಂಧನೆಗಳಿಲ್ಲ. 10 ವರ್ಷ ಅಂತರಗಳ ಫೋಟೋ ಮಾಹಿತಿ ತಿಳಿಸಿ ಕೊಡಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯದವರೂ ಕೂಡ ಈ ಚಾಲೆಂಜ್ ನ್ನು ಸ್ವೀಕರಿಸಬಹುದು. ಇಲ್ಲಿ ವಯಸ್ಸಿನ ಇತಿಮಿತಿಯೂ ಇಲ್ಲ. ಒಟ್ಟಿನಲ್ಲಿ 10 ವರ್ಷಗಳ ಹಳೆ ಫೋಟೋ ಹಾಗೂ 2 ವರ್ಷ ವರ್ಷ ಅಂತರವಿರುವ ಹೊಸ ಫೋಟೋಗಳಿದ್ದರೆ ಸಾಕು. ಆದರೆ ನೀವು ಸ್ವಲ್ಪವೂ ಬದಲಾಗಿಲ್ಲ ಅನ್ನುವುದನ್ನು ತೋರಿಸಿದರೆ ಇನ್ನೂ ಒಳ್ಳೆಯದು.
ವೈರಲ್ ಆದ ಕೊಹ್ಲಿ ಫೋಟೋ
ಈಗಾಗಲೇ ಅನೇಕ ಸ್ಟಾರ್ ಕ್ರಿಕೆಟರ್ ಗಳ ಫೋಟೋಗಳು ಎಲ್ಲೆಡೆ ಹರಿದಾಡುತ್ತಿರುವ ಹಾಗೆ ಇದೀಗ ಈ ಟ್ರೆಂಡ್ ಗೆ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರ ಹೆಸರು ಕೂಡ ಸೇರಿ ಕೊಂಡಿದೆ. ಅವರ ಫೋಟೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ವೈರಲ್ ಆಗಿರುವ ಫೋಟೋ ವಿರಾಟ್ ಅವರು 10 ವರ್ಷಗಳ ಹಿಂದೆ ಹೇಗಿದ್ದರು ಮತ್ತು ಈಗ ಹೇಗಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಇನ್ನು ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಅವರ ಫೋಟೋ ಕೂಡ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಐಸಿಸಿ ತನ್ನ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಹಾಕಿಕೊಂಡಿದ್ದು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವಂತಿದೆ.
ಬಾಲಿವುಡ್ ತಾರೆಗಳ ಚಾಲೆಂಜ್
ಯಾವುದೇ ಚಾಲೆಂಜ್ ಆರಂಭವಾದಗಲೂ ಅದಕ್ಕೆ ವ್ಯಾಪಕ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು ಬಾಲಿವುಡ್ ಚಿತ್ರರಂಗ. ಅದರಲ್ಲೂ ಬಾಲಿವುಡ್ ತಾರೆಗಳು ಚಾಲೆಂಜನ್ನು ತಕ್ಷಣವೇ ಸ್ವೀಕರಿಸಿ ಸವಾಲೊಪ್ಪಿಕೊಂಡಿದ್ದಾರೆ. ನಾವು ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಸೌಂದರ್ಯ ಹಾಗೆಯೇ ಇದೆ ಎನ್ನುತ್ತಾ ನಟ ನಟಿಯರು ಚಾಲೆಂಜ್ ಗೆ ಜೈ ಎಂದಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ನಟಿ ಸೋನಂ ಕಪೂರ್, ಇಶಾ ಗುಪ್ತ,ಮಂದಾರ ಬೇಡಿ, ಬಿಪಾಶಾ ಬಾಸು,ದೀಪಿಕಾ ಪಡುಕೋಣ್,ಅರ್ಮಾನ್ ಮಲಿಕ್,ಶಿಲ್ಪಾ ಶೆಟ್ಟಿ,ಕಾಜೋಲ್ ,ಅನುಷ್ಕಾ ಶರ್ಮ,ಶ್ರದ್ಧಾ ಕಪೂರ್,ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವು ಮಂದಿ ಹೆಸರುಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
ನಲವತ್ತು ವರ್ಷದ ಚಾಲೆಂಜ್
10 ವರ್ಷದ ಚಾಲೆಂಜ್ ಜನಪ್ರಿಯವಾಗುತ್ತಿದ್ದಂತೆಯೇ ಇದೀಗ ನಲವತ್ತು ಚಾಲೆಂಜ್ ಹವಾ ಆರಂಭವಾಗುವ ಹಂತದಲ್ಲಿದೆ. ಕಿರಿಕ್ ಹುಡುಗರು ಎಂಬ ಟೀಂವೊಂದು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರ ಫೋಟೋ ಹಾಕಿ 10 ವರ್ಷದ ಚಾಲೆಂಜ್ ಗೂ ಪೈಪೋಟಿ ನೀಡಿದೆ. ಇಲ್ಲಿ ನಾಲ್ಕು ಫೋಟೋಗಳನ್ನು ಸೇರಿಸಲಾಗಿದೆ. 1989ರಿಂದ ಹಿಡಿದು 2019ರವರೆಗೆ ಒಟ್ಟು 40 ವರುಷದ ಚಾಲೆಂಜ್. ಈ ಚಾಲೆಂಜ್ ನ ಉದ್ದೇಶ ಶಿವಣ್ಣನಿಗೆ ವಯಸ್ಸೇ ಆಗುವುದಿಲ್ಲವೆಂಬುದು ಆಗಿದೆ. ಶಿವಣ್ಣನಿಗೆ 57 ವರುಷ ಆದರೂ ಇನ್ನು ಯಂಗ್ ಆಗಿ ಕಾಣುತ್ತಿರುವ ಶಿವಣ್ಣ ಅವರನ್ನು ಅವರ ಅಭಿಮಾನಿಗಳು ಈ ರೀತಿ ಫೋಟೋ ಹಾಕಿ ಸಂಭ್ರಮಿಸಿದ್ದಾರೆ.
ಹೀಗೆ ಎತ್ತ ನೋಡಿದರತ್ತ ಈಗ 10 ವರುಷದ ಚಾಲೆಂಜ್ ನದ್ದೇ ಸುದ್ದಿ. ಭಿನ್ನ ವಿಭಿನ್ನ ಚಿತ್ರಗಳ ಮೂಲಕ ನಟ-ನಟಿಯರು ಮಾತ್ರವಲ್ಲದೇ ಜನಸಾಮಾನ್ಯರು ಕೂಡ ಕೈ ಜೋಡಿಸಿ ಈ ಚಾಲೆಂಜ್ ಗೆ ಸಾಥ್ ನೀಡುತ್ತಿರುವುದು ವಿಶೇಷವೆನಿಸುತ್ತದೆ.